'ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ' (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್- ಸಾರ್ಕ್ : - ), ಇದು ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಪ್ರಾದೇಶಿಕ ಸಂಘಟನೆಯಾಗಿದ್ದು, ೧೯೮೫ರಲ್ಲಿ ಸ್ಥಾಪನೆಯಾಗಿದೆ. ಸಾಮೂಹಿಕ ಸ್ವಾವಲಂಬನೆಗೆ ಒತ್ತು ನೀಡುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವಲ್ಲಿ ಪರಸ್ಪರರಿಗೆ ನೆರವಾಗುವುದು ಈ ಸಂಘಟನೆಯ ಮೂಲ ಉದ್ದೇಶ. ಭಾರತ, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಹಾಗೂ ನೇಪಾಳಗಳು ಸ್ಥಾಪಕ-ಸದಸ್ಯ ರಾಷ್ಟ್ರಗಳು. ಅಫ್ಘಾನಿಸ್ತಾನವು ನವದೆಹಲಿಯಲ್ಲಿ ನಡೆದ ಸಂಘಟನೆಯ ೧೪ನೇ ಶೃಂಗಸಭೆಯಲ್ಲಿ ದಿನಾಂಕ ಏಪ್ರಿಲ್ ೩, ೨೦೦೭ರಂದು ೮ನೇ ಸದಸ್ಯ ರಾಷ್ಟ್ರವಾಗಿ ಸಂಘಟನೆಗೆ ಸೇಪ೯ಡೆಗೊಂಡಿತು. ಸಂಘಟನೆಯ ಕೇಂದ್ರ ಕಛೇರಿಯು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿದೆ. == ಸಾರ್ಕ್ ಶೃಂಗಸಭೆಗಳ ಪಟ್ಟಿ == == ಉಲ್ಲೇಖ ==